ಲಂಚ ಪಡೆಯುವಾಗ ಕಂದಾಯ ಇಲಾಖೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

WhatsApp
Telegram
Facebook
Twitter
LinkedIn

ಕಲಬುರಗಿ: ಜಿಲ್ಲೆಯ ಜೇವರ್ಗಿಯಲ್ಲಿ ಲಂಚ ಪಡೆಯುವಾಗ ತಾಲೂಕಿನ ಕಂದಾಯ ಇಲಾಖೆ ಸಿಬ್ಬಂದಿ ಸತೀಶಕುಮಾರ್ ರಾಠೋಡ್ ಲೋಕಾಯುಕ್ತದ ಬಲೆಗೆ  ಬಿದ್ದಿದ್ದಾನೆ.

ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸತೀಶ್ ಕುಮಾರ್ ರಾಠೋಡ್ ಫೋನ್ ಪೇ ಮೂಲಕ 10,000 ರೂ. ಲಂಚ ಪಡೆದಿದ್ದರು. ಲೋಕಾಯುಕ್ತ ಎಸ್ಪಿ ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಇನ್‌ಸ್ಪೆಕ್ಟರ್ ಅರುಣ್ ಕುಮಾರ್ ಅವರ ತಂಡ ಪಟ್ಟಣದ ಮಿನಿ ವಿಧಾನಸೌಧದ ಎದುರುಗಡೆ ಸತೀಶ್ ಕುಮಾರ್ ರಾಠೋಡ್ ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಸತೀಶ್ ಕುಮಾರ್ ರಾಠೋಡ್ ಹೆಚ್ಚಿನ ವಿಚಾರಣೆಗಾಗಿ ಕಲಬುರಗಿಗೆ ಕರೆದೊಯ್ಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ದಾಳಿ ನಡೆಸಿದ ತಂಡದಲ್ಲಿ ಸಿಬ್ಬಂದಿ ಮಾಜೀದ್, ಅಸ್ಲಾಂ ಕೊಡಚಿ, ಪ್ರಮೋದ್, ರಾಣೋಜಿ ಇದ್ದರು.

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon