ರಾಣಿಬೆನ್ನೂರು: ಲಂಚ ತೆಗೆದುಕೊಳ್ಳುತ್ತಿರುವ ಸಮಯದಲ್ಲಿ ತಹಶೀಲ್ದಾರ್ ಕಚೇರಿಯ ಆಹಾರ ನಿರೀಕ್ಷಕ ಶಂಭು ಮಹದೇವಪ್ಪ ಸೋಮನಹಳ್ಳಿ, ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ರಾಘವೇಂದ್ರ ಶಿವರಾಂ ಪಾದ್ರೆ ಅವರು ತಮ್ಮ ತಂದೆ ಹೆಸರಿನ ನ್ಯಾಯಬೆಲೆ ಅಂಗಡಿ ಪ್ರಾಧಿಕಾರವನ್ನು ಅನುಕಂಪದ ಆಧಾರದ ಮೇಲೆ ತಮಗೆ ಮಂಜೂರು ಮಾಡಲು ಮನವಿಯನ್ನು ತಹಶೀಲ್ದಾರ್ ಕಚೇರಿಗೆ ಸಲ್ಲಿಸಿದ್ದರು. ಈ ಸಂಬಂಧ ಅನುಮತಿ ಪತ್ರವನ್ನು ನೀಡಲು ಆಹಾರ ನಿರೀಕ್ಷಕ ಶಂಭು ಮಹದೇವಪ್ಪ 20 ಸಾವಿರ ಹಣ ನೀಡಲು ಬೇಡಿಕೆ ಇಟ್ಟಿದ್ದರು. ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಗಣೇಶನಗರದ ನಿವಾಸಿ ರಾಘವೇಂದ್ರ ಶಿವರಾಂ ಪಾಸ್ತೆ ಎಂಬುವವರಿಂದ ಲಂಚ ಸ್ವೀಕರಿಸುವಾಗಲೇ ಶಂಭು ಮಹದೇವಪ್ಪ ರನ್ನು ಲೋಕಾಯುಕ್ತ ಅಧೀಕ್ಷಕ ಎಂ. ಎಸ್. ಕೌಲಾವುದೆ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಸಿ.ಮಧುಸೂದನ ನೇತೃತ್ವದ ತಂಡ ವಶಕ್ಕೆ ಪಡೆದಿದೆ.















