ಬೆಳಗಾವಿ, ಜೂನ್ ೧೬- ಕಮಕಾರಟ್ಟಿ ಸೇತುವೆಯ ಕೆಳಗೆ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಲಗಾದ ಗಣಪತಿ ಗಲ್ಲಿ ನಿವಾಸಿ ಪಿರಾಜಿ ಯಲ್ಲಪ್ಪ ಯೇಸುಚೆ (೩೨ ವರ್ಷ) ಎಂಬಾತನನ್ನು ಬಂಧಿಸಲಾಗಿದೆ. ಬಂಧಿತನಿಂದ ೩೦ ಸಾವಿರ ರೂಪಾಯಿ ಮೌಲ್ಯದ ೬೫೦ ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಿರೇಬಾಗೇವಾಡಿ ಠಾಣೆ ಪಿಎಸ್ ಐ ಅವಿನಾಶ ಎಂ.ವೈ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.